ಕನ್ನಡ

ಅಂತರಾಷ್ಟ್ರೀಯ  ವಿದ್ಯಾರ್ಥಿಗಳಿಗೆ ಸ್ವಾಗತ

ನಿಮ್ಮನ್ನು ನಮ್ಮ ನಗರಕ್ಕೆ ಸ್ವಾಗತಿಸಿ, ನಿಮಗೆ ಮನೆಯ ವಾತಾವರಣವನ್ನು ಸೃಷ್ಟಿ ಮಾಡಿಕೊಡುವುದೇ ನಮ್ಮ ಧ್ಯೇಯ

ಕಾರ್ಯಕ್ರಮಗಳು

ವರ್ಷಾದ್ಯಂತ  ವಿಧ ವಿಧವಾದ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ ನಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸ್ಥಳೀಯ ಮತ್ತು ಅಂತರಾಷ್ಟ್ರೀಯ ವಿಧ್ಯಾರ್ಥಿಯರನ್ನು ಭೇಟಿ ಮಾಡಿ, ಶನಿವಾರದ ಸಂಜೆ ಉಚಿತವಾದ ಊಟವನ್ನು ಸವಿಯಿರಿ (intercultural evenings) ನಿಮಗೆ ನಮ್ಮ ನಗರವನ್ನು ಸುತ್ತಿ ನೋಡಬೇಕೆ ? ಹಾಗಿದ್ದಲ್ಲಿ ನಮ್ಮ ಪ್ರಯಾಣ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿರಿ  (excursions) ನಿಮಗೆ ಸ್ಥಳೀಯ ಜನರನ್ನು ಭೇಟಿ ಮಾಡಬೇಕೆ ? ಹಾಗಿದ್ದಲ್ಲಿ ನಮ್ಮ ಊಟ-ನೋಟ ಕಾರ್ಯಕ್ರಮದಲ್ಲಿ ಭಾಗವಹಿಸಿ (eat & meet) ಗೆಳೆತನ ಬೆಳೆಸಲು ಜೀವನದ ಅನುಭವದ ಬಗ್ಗೆ ಚರ್ಚಿಸುವುದು ಒಂದು ಮಾಧ್ಯಮ. ಇದು ನಿಮಗೆ ಹಿಡಿಸಿದಲ್ಲಿ ನಮ್ಮ ಊಟ – ವಾದವಿವಾದ ಚಟುವಟಿಕೆಗಲ್ಲಿ ಸಂಜೆಯ ಹೊತ್ತಿನಲ್ಲಿ ಭಾಗವಹಿಸಬಹುದಾಗಿ ಸೂಚಿಸುತ್ತೇವೆ (dine & discuss)

ಮನೆಯ ವಾತಾವರಣ ಅನುಭವ ಕಾರ್ಯಕ್ರಮದಿಂದ ಸ್ಥಳೀಯ ಪರಿವಾರದೊಡನೆ ಬೆರೆತು ಈ ನಗರದ ಸಂಸ್ಕೃತಿ ಮತ್ತು ನಡೆ-ನುಡಿಗಳನ್ನು ತಿಳಿದುಕೊಳ್ಳಬಹುದು (Feel @ Home) ನಿಮಗೆ ಜೀವನದ ಪ್ರಶ್ನೆಗಳಿಗೆ ಉತ್ತರ ಬೇಕೇ ? ಹಾಗಿದ್ದಲ್ಲಿ ನಮ್ಮ ಪಾದ್ರಿಗಳನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆಯಬಹುದು (counseling) ನಿಮಗೆ ಇಸಾಯಿ ಧರ್ಮದ ಬಗ್ಗೆ ಇನ್ನು ಮಾಹಿತಿ ಬೇಕೇ ? ಹಾಗಿದ್ದಲ್ಲಿ ನಾವು ಏರ್ಪಡಿಸುವ ಇಸಾಯಿ ಧರ್ಮದ ಪಾಠ – ಪ್ರವಚನಗಳಲ್ಲಿ ಭಾಗವಹಿಸಿ ಇದನ್ನು ಕಲಿಯಬಹುದು (Christianity Course)  ನೀವು ಆಂಗ್ಲ ಇಗರ್ಜಿ ಸೇವೆ, ಅಥವಾ, ಸ್ಥಳೀಯ ಮತ್ತು ಅಂತರಾಷ್ಟ್ರೀಯ ಇಸಾಯಿ ಗುಂಪಿಗೆ ನೋಂದಣಿ ಪಡೆಯಬಹುದು (English Church Services)

ಡೆಲ್ಫ್ಟ್ ಪ್ರಾಜೆಕ್ಟ್ ವಿಚಾರ

ಡೆಲ್ಫ್ಟ್ ಪ್ರಾಜೆಕ್ಟ್, ಸುಧಾರಣಾ ಇಗರ್ಜಿಯ ಒಂದು ಯೋಜನೆ. ಇದನ್ನು ಇಮ್ಯಾನುಎಲ್ ಇಗರ್ಜಿಯಲ್ಲಿ ಸ್ಥಾಪಿಸಲ್ಪಟ್ಟಿದೆ ಮತ್ತು TU DELFT ವಿಶ್ವವಿದ್ಯಾನಿಲಯದ ಸಮೀಪದಲ್ಲಿ ಇದೆ

ಈ ಯಾಜನೆಯನ್ನು ಆಗಸ್ಟ್ 2012 ರಲ್ಲಿ ಆರಂಭಿಸಲಾಯಿತು. ಅಂತರಾಷ್ಟ್ರೀಯ ವಿದ್ಯಾರ್ಥಿಗಳನ್ನು ಸ್ವಾಗತಿಸುವುದು, ನಮ್ಮ ಸಮಯ ಮತ್ತು ಗೆಳೆತನವನ್ನು ಹಂಚಿಕೊಳ್ಳುವುದು  – ಇದೆ ಈ ಯೋಜನೆಯ ಸದ್ದುದ್ದೇಶ.  ನಾವು ಈಗಾಗಲೇ ನೂರಕ್ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ ಸಾವಿರಾರು ಅಂತರಾಷ್ಟ್ರೀಯ ವಿದ್ಯಾರ್ಥಿಗಳನ್ನು ಬರಮಾಡಿಕೊಂಡಿದ್ದೇವೆ.

ನಾವು ನಮ್ಮ ಯೋಜನೆ-ಚಟುವಟಿಕೆ-ಕಾರ್ಯಕ್ರಮಗಳಲ್ಲಿ ಯಶಸ್ವೀ ಹೊಂದಲು ಸ್ಥಳೀಯರ ಬೆಂಬಲವೇ ಕಾರಣವಾಗಿದೆ ಈ ಡೆಲ್ಫ್ಟ್ ಪ್ರಾಜೆಕ್ಟ್ ಯೋಜನೆಯಲ್ಲಿ ಇಮ್ಯಾನುಎಲ್ ಇಗರ್ಜಿಯ ಇಗರ್ಜಿಯ ಇಬ್ಬರು ಪಾದ್ರಿಯರು, ಎರಡು ಇಸಾಯಿ ಒಕ್ಕೂಟಕ್ಕೆ ಸೇರಿದ ವಿದ್ಯಾರ್ಥಿಗಳು ಮತ್ತು ಇಸಾಯಿ ಜನಾಂಗಕ್ಕೆ ಸೇರಿಧ ಎಷ್ಟೋ ಮಂದಿ ಇರುತಾರೆ. ಇದಾಗಿ, ಇಮ್ಮಾನುಎಲ್ ಇಗರ್ಜಿಗೂ ಹಾಗು International Reformed Evangelical Fellowship (IREF)  ನಡುವಣ ಒಪ್ಪಂದದ ಮೇರೆಗೆ ಇಗರ್ಜಿಯ ಅಂತರಾಷ್ಟ್ರೀಯ ಸೇವೆಗಳನ್ನು ನಡೆಸಲಾಗುತ್ತದೆ.

ಡೆಲ್ಫ್ಟ್ ಪ್ರಾಜೆಕ್ಟ್ ಸೇರಿಕೊಳ್ಳಿ !!

ಸಾಮಾನ್ಯವಾಗಿ ಡೆಲ್ಫ್ಟ್ ಪ್ರಾಜೆಕ್ಟ್ ಚಟುವಟಿಕೆ ಮತ್ತು ಕಾರ್ಯಕ್ರಮಗಳು ಉಚಿತವಾಗಿದ್ದು, ಯಾವುದೇ ರೀತಿಯ ಸದಸ್ಯತೇ ಬೇಕಾಗಿಲ್ಲ

ಕೆಲವು ಚಟುವಟಿಕೆ-ಕಾರ್ಯಕ್ರಮಗಳನ್ನು ಮೇಲ್ಮಟ್ಟದ ರೀತಿಯಲ್ಲಿ ಆಯೋಜಿಸಲು, ಜಾಲತಾಣದ ಮೂಲಕ ನೋಂದಣಿ ಖಡ್ಡಾಯ ಮತ್ತು ಅತ್ಯಗತ್ಯ

ಖಾಲಿ ಹುದ್ದೆ

ಅಂತರಾಷ್ಟ್ರೀಯ ವಿದ್ಯಾರ್ಥಿಗಳು ನಮ್ಮ ತಂಡ ಸೇರುವುದು ನಮಗೆ ಹೆಮ್ಮೆಯ ವಿಷಯ. ನಿಮಗೆ ನಮ್ಮ ತಂಡ ಸೇರಬೇಕೇ ? ಹಾಗಿದ್ದಲ್ಲಿ ನಮ್ಮನ್ನು [welcome@delftproject.nl] ಮೇಲೆ ಸೂಚಿಸಿರುವ ವಿದ್ಯುನ್ಮಾನ್ಯ ಅಂಚೆಯ ಮೂಲಕ ಸಂಪರ್ಕಿಸಿ

ನಮ್ಮನ್ನು ಸೋಶಿಯಲ್ ಮೀಡಿಯಾ ದಲ್ಲಿ ಫಾಲೋ ಮಾಡಿ, ನಮ್ಮ ಚಟುವಟಿಕೆಗಳ ವಿವರ ತಿಳಿದು ಅದರಲ್ಲಿ ಭಾಗವಹಿಸಿ
ನಮ್ಮನ್ನು ಫೇಸ್ಬುಕ್ ನಲ್ಲಿ ಲೈಕ್ ಮಾಡಿ ನಮ್ಮನ್ನು ಇನ್ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ ನಮ್ಮನ್ನು ಯೂಟ್ಯೂಬ್ ನಲ್ಲಿ ವೀಕ್ಷಿಸಿ ನಮ್ಮ ವಾರ್ತಾಪತ್ರಗಳು ನಿಮಗೆ ಸಿಗುವಂತೆ ನೋಂದಣಿ ಮಾಡಿಕೊಳ್ಳಿ

ಸಂಪರ್ಕ

ಸಾಮಾನ್ಯ ವಿಷಯ, ಸಾಧಾರಣ ಸಮಸ್ಯೆ-ಪ್ರಶ್ನೆ ಅಥವಾ ಟಿಪ್ಪಣಿ-ವ್ಯಾಖ್ಯಾನಗಳಿಗಾಗಿ ವಿದ್ಯುನ್ಮಾನ್ಯ ಅಂಚೆ [info@delftproject.nl] ಸಂಪರ್ಕಿಸಿ

ನಮ್ಮ ಪಾದ್ರಿಗಳೊಡನೆ ಮಾತನಾಡಲು ಬಯಸುವಿರಾ ? ಹಾಗಿದ್ದಲ್ಲಿ Simon van der Lugt ಅವರನ್ನು [simon.vanderlugt@delftproject.nl] ಮತ್ತು Hans-Jan Roosenbrand ಅವರನ್ನು [hansjan.roosenbrand@delftproject.nl] ಸಂಪರ್ಕಿಸಬಹುದು

ನಮ್ಮ ತಂಡವನ್ನು ಬೆಂಬಲಿಸಲು ಬಯಸುವಿರಾ ? ಹಾಗಿದ್ದಲ್ಲಿ ನಮನ್ನು ವಿದ್ಯುನ್ಮಾನ ಅಂಚೆಯ [welcome@delftproject.nl] ಮೂಲಕ ಸಂಪರ್ಕಿಸಿ

ಮತ್ತೆ ಸಂದರ್ಶಿಸೋಣ


ಕನ್ನಡ ಭಾಷೆಗೆ ಅನುವಾದ ಮಾಡಿ ತಮ್ಮ ಸಹಾಯವನ್ನು ನೀಡಿ ಸಹಕರಿಸಿದ ಕಾರ್ತಿಕ್ ರಾಮನ್ ರವರಿಗೆ ನಮ್ಮೆಲರ ವಂದನೆಗಳು

ಡೆಲ್ಫ್ಟ್ ನಗರಕ್ಕೆ ಸುಸ್ವಾಗತ !! ನಿಮ್ಮ ಕನಸುಗಳೆಲ್ಲ ನನಸಾಗಲಿ